ಮಾಹಿತಿ

ಇದು ಕನ್ನಡದ ಪ್ರಕಾಶಕರನ್ನು ಹಾಗೂ ಲೇಖಕರನ್ನು ಮತ್ತು ಓದುಗರನ್ನು ಆನ್‌ಲೈನ್ ಮೂಲಕ ಒಂದು ಮಾಡುವ ಪ್ರಯತ್ನ. ಈ ತಾಣವು ‘ಲೇಖಕ-ಪ್ರಕಾಶಕ ಮತ್ತು ಓದುಗರ ನಡುವಿನ ಸೇತುವೆ‘ಯಾಗಿ ಕೆಲಸ ಮಾಡುತ್ತಿದ್ದು ಇತ್ತೀಚಿನ ಕನ್ನಡದ ಪುಸ್ತಕಗಳ ಜಾಲತಾಣಗಳಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿ ನಿಮ್ಮ ಪುಸ್ತಕಗಳನ್ನು (ಲೇಖಕರು ಅಥವಾ ಪ್ರಕಾಶಕರು) ಓದುಗರಿಗೆ ನೇರವಾಗಿ ಪರಿಚಯಿಸಬಹುದು.

 

ದಿನನಿತ್ಯ ರಾಜ್ಯದ ಒಂದಿಲ್ಲೊಂದು ಕಡೆ ಕನ್ನಡದ ಪುಸ್ತಕಗಳು ಪ್ರಕಟಗೊಳ್ಳುತ್ತಲೇ ಇರುತ್ತವೆ. ಎಷ್ಟೋ ಜನ ಲೇಖಕ/ಪ್ರಕಾಶಕರು ತಮ್ಮ ಪುಸ್ತಕದ ಬಿಡುಗಡೆ ಸಮಾರಂಭದ ಕಾರ್ಯಕ್ರಮವನ್ನೂ ಮಾಡುವುದಿಲ್ಲ. ಮಾಡಿದರೂ ಅದರ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಾಗುವುದು ಅಷ್ಟಕಷ್ಟೇ. ಹಿರಿಯ ಲೇಖಕರ ಪುಸ್ತಕವೊಂದು ಬಿಡುಗಡೆಗೂ ಮುನ್ನ ಸುದ್ದಿ ಮಾಡಿದರೆ, ಕಿರಿಯ ಲೇಖಕರ ಪುಸ್ತಕಗಳನ್ನು ಕೇಳುವವರೇ ಇಲ್ಲ. ಅವರ ಪುಸ್ತಕಗಳು ಚೆನ್ನಾಗಿದ್ದರೂ ಅದು ನಿಜವಾದ ಓದುಗರನ್ನು ತಲುಪುವಲ್ಲಿ ಸೋಲುತ್ತಿದೆ. ಇದಕ್ಕೆ ಕಾರಣ ಲೇಖಕ/ಪ್ರಕಾಶಕ ಮತ್ತು ಓದುಗರ ನಡುವಿನ ಸಂಪರ್ಕದ ಕೊರತೆಯೇ ಆಗಿದೆ.

 

ಓದುಗರು ಯಾವುದೋ ದೊಡ್ಡ ಪುಸ್ತಕ ಮಳಿಗೆಗೆ ಹೋಗಿ ಮೊದಲೇ ಕೇಳಿ ತಿಳಿದಿದ್ದ ಪುಸ್ತಕಗಳನ್ನೇ ಕೊಂಡು ಓದುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಬೇರೆ ಲೇಖಕರ ಉತ್ತಮ ಪುಸ್ತಕಗಳ ಪರಿಚಯವೇ ಓದುಗರಿಗೆ ಆಗಿರುವುದಿಲ್ಲ. ಆದರೆ ಈ ತಾಣದಲ್ಲಿ ಅದನ್ನು ಪರಿಹರಿಸುವ ಪ್ರಯತ್ನ ಮಾಡಲಾಗಿದೆ. ಲೇಖಕರು ಮತ್ತು ಪ್ರಕಾಶಕರು ತಮ್ಮ ಪುಸ್ತಕಗಳನ್ನು ನೇರವಾಗಿ ಇಲ್ಲಿ ಪರಿಚಯಿಸಿಕೊಳ್ಳಬಹುದು. ಈ ತಾಣವನ್ನು ಜಾಲಾಡುವ ಓದುಗರಿಗೆ ಎಲ್ಲಾ ಪುಸ್ತಕಗಳ ಸ್ಪಷ್ಟ ಮಾಹಿತಿ ದೊರೆಯುತ್ತದೆ.

 

ಮಾಹಿತಿ :

 

ನಿಯಮಗಳು :

ಕನ್ನಡದ ಲೇಖಕ ಪ್ರಕಾಶಕರಿಗೆ ಅನುಕೂಲ ಮಾಡಿ ಆ ಮೂಲಕ ಕನ್ನಡದ ಬೆಳವಣಿಗೆಗೆ ಸಹಕಾರಿಯಾಗಲು ನಿರ್ಮಿಸಿರುವ ಜಾಲತಾಣ ಇದು.

ಆದರೆ,

ಇಲ್ಲಿ ಸೇರಿಸುವ ಪುಸ್ತಕಗಳ ಗುಣಮಟ್ಟದ ಬಗ್ಗೆ ಈ ಜಾಲತಾಣವು ಜವಾಬ್ದಾರಿಯಾಗಿರುವುದಿಲ್ಲ.

ಪ್ರಕಾಶಕ/ಲೇಖಕರ ಜೊತೆ ವ್ಯವಹರಿಸುವುದು ಓದುಗರ ಸ್ವಂತ ವಿಚಾರ. ಅದರಲ್ಲಿ ಯಾವುದೇ ರೀತಿಯ ತೊಂದರೆ ಏರ್ಪಟ್ಟರೆ ಅದಕ್ಕೂ ಈ ಜಾಲತಾಣಕ್ಕೂ ಯಾವುದೇ ಸಂಬಂಧವಿಲ್ಲ.

ಹೆಚ್ಚಿನ ನಿಯಮಗಳು ತಾಣದ ಮಾಲೀಕರಿಗೆ ಸೇರಿದ್ದು ಯಾವುದೇ ಸಮಯದಲ್ಲಿ ನಿಯಮಗಳನ್ನು ಸೇರಿಸುವ, ಬದಲಯಿಸುವ ಹಕ್ಕು ಇರುತ್ತದೆ.