₹ 700.00 ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು - ಎನ್.ಶಂಕರಪ್ಪ ತೋರಣಗಲ್ಲು

Published date: October 18, 2017
 • ಪ್ರಕಾಶಕರು: ಕಾವ್ಯಕಲಾ ಪ್ರಕಾಶನ, ಎನ್.ಶಂಕರಪ್ಪ ತೋರಣಗಲ್ಲು, 2017, India

 • ಪ್ರಕಟವಾದ ವರ್ಷ: 2017

 • ಬರೆದವರು: ಎನ್.ಶಂಕರಪ್ಪ ತೋರಣಗಲ್ಲು

 • ಪ್ರಕಾಶಕರು: ಕಾವ್ಯಕಲಾ ಪ್ರಕಾಶನ

 • address: ೧೨೭೩, ೭ ನೆ ಅಡ್ಡರಸ್ತೆ , ಚಂದ್ರಾ ಬಡಾವಣೆ , ವಿಜಯನಗರ -೫೬೦೦೪೦, 9964124831

ಭಾರತದಲ್ಲಿ ಸ್ವಾಮಿ ವಿವೇಕಾನಂದರು ಅತ್ಯುನ್ನತ ಗೌರವಾದರಗಳಿಗೆ ಪಾತ್ರರಾಗಿದ್ದಾರೆ. ಅವರನ್ನು ಧೀಮಂತ ಸಂನ್ಯಾಸಿ , ವೇದಾಂತ ಕೇಸರಿ , ಬ್ರಹ್ಮ ತೇಜಸ್ಸಿನ ಕ್ಷಾತ್ರ ವೀರನೆಂದು ಪರಿಗಣಿಸಲಾಗುತ್ತದೆ. ಭಾರತದ ಸ್ವಾತಂತ್ರ ಸಂಗ್ರಾಮ ಮತ್ತು ಆಧುನಿಕ ಭಾರತದ ಉದಯದ ಹಿಂದೆ ಸ್ವಾಮಿಗಳ ಪ್ರೇರಣೆಯಿದೆಯೆನ್ನುವ ವ್ಯಾಪಕ ನಂಬಿಕೆಯಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಅವರು ಹಿಂದೂಧರ್ಮದ ಅಧಿಕೃತ ಮೂಲವೆನ್ನುವ ಭಾವನೆ ವಿದ್ಯಾವಂತರಲ್ಲಿ ತುಂಬಿದೆ. ಸ್ವಾಮಿಗಳು ದೇಶಪ್ರೇಮ ತುಂಬಿ ತುಳುಕುತ್ತಿದ್ದ ಧೀರ ಸಂನ್ಯಾಸಿ ಮಾತ್ರವಲ್ಲ ಅವರು ಶಿವ, ಬುದ್ಧ , ಯೇಸುವಿನ ಅವತಾರ ಎನ್ನುವ ಭಾವಾವೇಶಗಳು ಕೆಲವರಲ್ಲಿವೆ. ಕಾವಿ ಬಟ್ಟೆಯುಟ್ಟು , ಎದೆಯ ಮೇಲೆ ಕೈಕಟ್ಟಿಕೊಂಡು ನಿಂತಿರುವ ಧೀರ ಉದಾತ್ತ ನಿಲುವಿನ ಅವರು ದೇಶದ ಆತ್ಮವಿಶ್ವಾಸದ ಸಂಕೇತವಾಗಿದ್ದಾರೆ. ಆ ನಿಲುವಿಗೆ ಲಕ್ಷಾಂತರ ಯುವಕರು ಮನಸೋತಿದ್ದಾರೆ, ತರುಣರು ಮೈಮರೆತಿದ್ದಾರೆ. ಸ್ವಾಮಿಗಳು ಹಿಂದೂಧರ್ಮದ ಪ್ರತಿನಿಧಿ ಮಾತ್ರವಲ್ಲ , ಶಿಕ್ಷಣ ತಜ್ಞ, ಆಧುನಿಕ ಚಿಂತಕ , ದೀನದಲಿತರ ಆಶಾಕಿರಣ , ಸಮಾಜ ಸುಧಾರಣೆಯ ಮುಂದಾಳು . ಹೆಂಗಸರ ಬಿಡುಗಡೆ ಮತ್ತು ಏಳ್ಗೆಯ ಹರಿಕಾರ , ಸಮಕಾಲೀನ ಅಂತಾರಾಷ್ಟ್ರೀಯ ರಾಜಕೀಯ ವಿಶ್ಲೇಷಕ , ವಿಶ್ವ ಸೋದರತ್ವ ಪ್ರತಿಪಾದಕ ಎನ್ನುವ ಹೆಗ್ಗಳಿಕೆಗಳಿವೆ. ಸ್ವಾಮಿಗಳ ಇಂತಹ ಬಹುಮುಖಗಳ , ಬಹುಪ್ರತಿಭೆಗಳ ಚಿತ್ರಣವನ್ನು ಅವರ ಗುರುಭಾಯಿಗಳು , ಅವರೇ ಸ್ಥಾಪಿಸಿದ ರಾಮಕೃಷ್ಣ ಮಠ ಮತ್ತು ಮಿಷನ್ ಪರಂಪರೆ , ಅಭಿಮಾನಿಗಳು , ಅನುಯಾಯಿಗಳು ಕಳೆದ ನೂರುಹತ್ತು ವರ್ಷಗಳಿಂದ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ರಸ್ತೆಯ ಮೇಲೆ ನಿಂತ ಜನ ಸಾಮಾನ್ಯನಿಂದ ಹಿಡಿದು ಅತ್ಯುನ್ನತ ಸ್ಥಾನ ಅಲಂಕರಿಸಿರುವ ದೇಶದ ರಾಜಕೀಯ ಮುಂದಾಳು , ಸಹಸ್ರಾರು ಕೋಟಿಗಳ ವ್ಯವಹಾರದ ಉದ್ದಿಮೆದಾರನಿಗೂ ಸ್ವಾಮಿಗಳು ಮಾದರಿಯಾಗಿದ್ದಾರೆ. ದೇಶವೇ ಆರಾಧಿಸುತ್ತಿರುವ ಇಂತಹ ಸ್ವಾಮಿಗಳ ಜೀವನವನ್ನು ವಿಮರ್ಶಿಸುವ ಅಗತ್ಯವೇ ಇಲ್ಲವೆಂದು ಭಾಸವಾಗಬಹುದಾದರೂ ತೂರಿದಾಗ ಉಳಿಯುವ ಕಾಳೆಷ್ಟು , ಜೊಳ್ಳೆಷ್ಟು ಎಂದು ಯಾರಾದರೂ, ಎಂದಾದರೂ ನೋಡುವ ಆವಶ್ಯಕತೆಯಿದೆ, ಆರಾಧನೆ ಮತ್ತು ಹೊಗಳಿಕೆಗಳ ದೈವಪ್ರಭೆಯೊಳಗೆ (ಬಿಳುಪು-ಖ್ಯಾತ, ಪರಿಚಿತ) ಸಹಜ ಮಾನವ ವಿವೇಕಾನಂದನನ್ನು (ಕಪ್ಪು-ಅಪರಿಚಿತ, ಅಜ್ಞಾತ) ಹುಡುಕುವುದೇ ಒಂದು ಸವಾಲಿನ ಕೆಲಸ. ಲಭ್ಯವಿರುವ ಸ್ವಾಮಿಗಳ ಎಲ್ಲ ಜೀವನ ಚರಿತ್ರೆಗಳು ಅವರು ಇದ್ದುದಕ್ಕಿಂತ , ಮಾಡಿದ್ದಕ್ಕಿಂತ ಮಹತ್ತಾಗಿ , ಬೃಹತ್ತಾಗಿ ಅವರನ್ನು ಚಿತ್ರಿಸುತ್ತವೆ. ಅನುಯಾಯಿ, ಅಭಿಮಾನಿಗಳು ಕಡೆದು ನಿಲ್ಲಿಸಿರುವ ಧಾರ್ಮಿಕ , ರಾಷ್ಟ್ರೀಯ ನಾಯಕ ವಿವೇಕಾನಂದ ಮತ್ತು ನಿಜವಾದ ವಿವೇಕಾನಂದರನ್ನು ಬೇರ್ಪಡಿಸಿ ನೋಡುವ , ಸ್ವಾಮಿಗಳು ಏನು ಹೇಳಿದರು ಎನ್ನುವುದಕ್ಕಿಂತ ಹೇಗೆ ಬಾಳಿದರು ಎಂದು ಹುಡುಕುವ ಪ್ರಯತ್ನ ಈ ಪುಸ್ತಕದಲ್ಲಿದೆ.

ಒಲವು
ಒಲವು 5 ಮತ
ಶಂಕರಪ್ಪ ತೋರಣಗಲ್ಲು
0 ಮತ

Contact seller Share

Useful information

 • Avoid scams by acting locally or paying with PayPal
 • Never pay with Western Union, Moneygram or other anonymous payment services
 • Don't buy or sell outside of your country. Don't accept cashier cheques from outside your country
 • This site is never involved in any transaction, and does not handle payments, shipping, guarantee transactions, provide escrow services, or offer "buyer protection" or "seller certification"

Related listings

 • ಆಧುನಿಕ ಭಾರತದ ಇತಿಹಾಸ
  ಆಧುನಿಕ ಭಾರತದ ಇತಿಹಾಸ
  ಇತಿಹಾಸ - ಬಿಪಿನ್ ಚಂದ್ರ, Bipin Chandra (III - 2014) - April 16, 2016 ₹ 250.00

  ಆಧುನಿಕ ಭಾರತದ ಇತಿಹಾಸ ಕೃತಿಯು ಬ್ರಿಟಿಷ್ ಇಂಡಿಯಾ ಎಂದು ತಿಳಿಯಲಾಗಿದ್ದ ಪ್ರದೇಶದ ಅಧಿಕಾರಯುತ ಇತಿಹಾಸವನ್ನು ಸ್ಥೂಲವಾಗಿ ನಿರೂಪಿಸುತ್ತದೆ. ಕೃತಿಯ ಪಠ್ಯವು, ಭಾರತದಲ್ಲಿ ರಾಷ್ಟ್ರೀಯತೆ ಮತ್ತು ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಲೇಖಕರು ಮಾಡಿದ ಸಂಶೋಧನೆಯ ಫಲಿತಗಳು ಮತ್ತು ಅದೇ ಅವಧಿಯ ಖ್ಯಾತ ಇತಿಹಾಸಕಾರರ ಕೃ...

 • ಸರ್ ಎಂ.ವಿ-ಒಂದು ಬಿಚ್ಚು ನೋಟ
  ಸರ್ ಎಂ.ವಿ-ಒಂದು ಬಿಚ್ಚು ನೋಟ
  ಇತಿಹಾಸ - ಎನ್.ಶಂಕರಪ್ಪ ತೋರಣಗಲ್ಲು (೨೦೧೫) - July 15, 2015 Free

  ಭಾರತ ರತ್ನ ಸರ್.ಎಂ.ವಿಯವರನ್ನು ಕುರಿತಾಗಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಹತ್ತಾರು ಪುಸ್ತಕ , ನೂರಾರು ಲೇಖನಗಳು ಬಂದಿವೆ. ಈ ಎಲ್ಲ ಪುಸ್ತಕ ಮತ್ತು ಲೇಖನಗಳು ಬಹುತೇಕ ಒಂದೇ ಬಗೆಯಲ್ಲಿ ಸರ್.ಎಂ.ವಿಯವರ ಜೀವನ ಮತ್ತು ಸಾಧನೆಗಳನ್ನು ಚಿತ್ರಿಸುತ್ತವೆ. ಇವು ಯಾವುದರಲ್ಲಿಯೂ ವಸ್ತುನಿಷ್ಟ ಭಿನ್ನ ಚಿತ್ರಣವಾಗಲ...

 • ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯ ಮುಸ್ಲಿಮರ ಪಾತ್ರ
  ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯ ಮುಸ್ಲಿಮರ ಪಾತ್ರ
  ಇತಿಹಾಸ - ಶಾಂತಿಮೈ ರಾಯ್ / ಅನುವಾದಕರು: ನೀಲಾಂಬರಿ (2011) - September 8, 2014 ₹ 40.00

  ನಮ್ಮ ಇತಿಹಾಸವನ್ನು ವಿರೂಪಗೊಳಿಸಿದಂತೆಯೇ ನಮ್ಮ ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ಕೆಲವು ಸಂದರ್ಭಗಳಲ್ಲಿ ವಿರೂಪಗೊಳಿಸಲಾಗಿದೆ. ಉದಾಹರಣೆಗೆ, ನಮ್ಮ ರಾಷ್ಟ್ರೀಯ ಚಳುವಳಿಯಲ್ಲಿ ಮುಸ್ಲಿಮರು ವಹಿಸಿದ್ದ ಪಾತ್ರ ಶ್ಲಾಘನೀಯವಾಗಿತ್ತು, ಅಮೋಘವಾಗಿತ್ತು. ರಾಷ್ಟ್ರಪ್ರೇಮ, ಧೈರ್ಯ, ಸಾಹಸಗಳಲ್ಲಿ ತಾವೇನೂ ಇತರ ಭಾರ...